ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ಕೆದಂಬಾಡಿ ಬಿ.ಜೆ.ಪಿ. ಪಂಚಾಯತ್ ಸಮಿತಿ ಇದರ ಸಹಯೋಗದಲ್ಲಿ ಕೋಟಿವೃಕ್ಷ ಆಂದೋಲನ ಕಾರ್ಯಕ್ರಮ ಕೆದಂಬಾಡಿ ಶ್ರಿ ರಾಮ ಮಂದಿರ ಮತ್ತು ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು.

ನಾವಿರುವುದು ಪ್ರಕೃತಿ ಮಡಿಲಲ್ಲಿ – ಕಡಮಜಲು ಸುಭಾಷ್ ರೈ
ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಫಾಟಿಸಿದ ಪ್ರಗತಿಪರಕೃಷಿಕರು ಹಾಗೂ ’ಪರಿಸರ ಮಿತ್ರ’ ಪ್ರಶಸ್ತಿ ವಿಜೇತರಾದ ಕಡಮಜಲು ಸುಭಾಷ್ ರೈಯವರು ಮಾತನಾಡಿ’ನಾವಿರುವುದು ಪ್ರಕೃತಿ ಮಡಿಲಲ್ಲಿ’. ಮರಗಿಡಗಳು ಪ್ರಕೃತಿಗೆ ಆಧಾರ ನೆರಳು ನೀಡುವ ತಾಣ. ಇಂತಹ ಜೀವ ಇರುವ ಒಂದು ಜೀವಿಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ವಿವಿಧ ಸಂಘಸಂಸ್ಥೆಗಳು ಹಮ್ಮಿಕೊಂಡ ಈ ಯೋಜನೆ ಯಶಪ್ರದವಾಗಲಿ ಎಂದು ಶುಭ ಹಾರೈಸಿದರು. ಮಕ್ಕಳನ್ನು ಗಿಡ ನೆಡಲು ಪ್ರೇರೇಪಿಸಿದ ಅವರು ಪ್ರತಿದಿನ ಗಿಡದಲ್ಲಿ ಮಾತನಾಡುವ ಕಲೆಯನ್ನು ಬೆಳೆಸಿಕೊಳ್ಳಿ ಎಂದರು. ಇದನ್ನು ಒಂದು ಆಂದೋಲನಾ ರೀತಿಯಲ್ಲಿ ಮುಂದುವರಿಸುವ ಅಗತ್ಯವಿದೆ ಎಂದರು.


ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್‌ರೈ, ಕೊರಗ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕೆದಂಬಾಡಿ ಬಿ.ಜೆ.ಪಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ರತನ್ ರೈ ಕುಂಬ್ರ ಕಾರ್ಯಕ್ರಮಕ್ಕೆ ಸಹಕರಿಸಿದರು. ವಾರ್ಡ್ ಸಮಿತಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ ಎ.ಪಿ.ಎಂ.ಸಿ ನಿರ್ದೇಶಕರಾದ ಕೃಷ್ಣಕುಮಾರ್ ರೈ ಗುತ್ತು, ಬಿ.ಜೆ.ಪಿ ವಾರ್ಡ್ ಸಮಿತಿ ಅಧ್ಯಕ್ಷ ಯಶೋಧರ ಚೌಟ, ತಾಲೂಕು ಯುವ ಮೋರ್ಚಾ ಸದಸ್ಯರಾದ ಸಂತೋಷ್ ಕುಮಾರ್ ರೈ ಕೊರಂಗ, ವಾರ್ಡ್ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರೈ ಚಾವಡಿ, ಪಂಚಾಯತ್ ಸಮಿತಿ ಕಾರ್ಯದರ್ಶಿ ಭಾಸ್ಕರ ಬಲ್ಲಾಳ್, ವಾರ್ಡ್ ಸಮಿತಿ ಕಾರ್ಯದರ್ಶಿ ಹರೀಶ್ ಮಿತ್ತೋಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿಮಿತ ರೈ ಕೆರೆಮೂಲೆ, ನಿವೃತ್ತ ಸೈನಿಕರಾದ ಭವಾನಿಶಂಕರ ಗೌಡ, ಕೆ.ಎಂ.ಎಫ್ ನಿರ್ದೇಶಕಿ ವೀಣಾರೈ, ಕೆದಂಬಾಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ಕೂವೆಂಜ, ಮುಖ್ಯಶಿಕ್ಷಕ ನಿತ್ಯಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀಮತಿ ವಿದ್ಯಾ ಅನಿಲ್, ರುಕ್ಮಯ್ಯ, ಗಣೇಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಗಿಡ ನೆಡುವಲ್ಲಿ ಸಹಕರಿಸಿದರು.