ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಇವರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳ ನೇತೃತ್ವದಲ್ಲಿ ಕುರಿಯ ಗ್ರಾಮದಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಕುರಿಯ ಗ್ರಾಮಕ್ಕೆ ತೆರಳಿ ಆಂದೋಲನದಲ್ಲಿ ಭಾಗವಹಿಸಿದರು.

ಎ.ಪಿ.ಎಂ.ಸಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೂಡಿಯಾರ್ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ ಇವರ ಮುಂದಾಳ್ವತದಲ್ಲಿ ಕಾರ್ಯಕ್ರಮ ನಡೆಯಿತು. ಕುರಿಯ ದ.ಕ.ಜಿ.ಪಂಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮತ್ತು ಕುರಿಯ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಕುರಿಯ ಅಂಗನವಾಡಿ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿ ನೆಡಲಾಯಿತು.


ಶಾಲಾ ಮಕ್ಕಳು, ಪೋಷಕರು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಅದರ ಪೋಷಣೆಯ ಜವಾಬ್ದಾರಿ ವಹಿಸುವಂತೆ ಶ್ರೀ ರಾಧಾಕೃಷ್ಣ ಬೂಡಿಯಾರ್ ಮಾರ್ಗದರ್ಶನ ನೀಡಿದರು. ಕುರಿಯ ಶಾಲಾ ಮಕ್ಕಳು – ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರಿನಗಣ್ಯರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು-ಶಿಕ್ಷಕರು ಆಂದೋಲನದಲ್ಲಿ ಭಾಗವಹಿಸಿದರು.