ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀ ರಾಜೇಶ್ ವಿಟ್ಲ ನೇತೃತ್ವದಲ್ಲಿ ನಡೆಯಲಿರುವ ನೃತ್ಯತರಗತಿಯು ದಿನಾಂಕ 19-6-2017 ರಂದು ಶಾಲಾ ವಠಾರದಲ್ಲಿ ಉದ್ಫಾಟನೆಗೊಂಡಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯ್ಕ್ರು ವಹಿಸಿ, ನೃತ್ಯ ಎಂಬುದು ತಪಸ್ಸು ಇದ್ದ ಹಾಗೆ ಸತತ ಪ್ರರಿಶ್ರಮವಿದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಹೆಳಿದರು. ನೃತ್ಯ ಗುರು ರಾಜೇಶ್ ವಿಟ್ಲ ಮಾತನಾಡಿ ಮಕ್ಕಳಿಗೆ ಸಮಯಪಾಲನೆ ಮಾಡುವ ಜೊತೆಗೆ ಶ್ರದ್ಧೆಯಿಂದ ಕಲಿಯುವಂತೆ ಕಿವಿಮಾತು ಹೇಳಿದರು.
ನೃತ್ಯ ತರಗತಿಗಳು ಪ್ರತೀ ಸೋಮವಾರ ಸಂಜೆ 4 ರಿಂದ 5.30 ರ ವರೆಗೆ ನಡೆಯಲಿದ್ದು, ತಿಂಗಳಿಗೆ 100 ರೂ. ಶುಲ್ಕ ಎಂದು ಆಸಕ್ತರು ಬಂದು ಸೇರಿಕೊಳ್ಳಬಹುದೆಂದು ಸಭೆಯಲ್ಲಿ ತಿಳಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ವಸಂತ ಸುವರ್ಣ ಸಂದರ್ಭೋಚಿತವಾಗಿ ಮಾತನಾಡಿದರು. ಕು. ಶ್ರೇಯಾ ಪ್ರಾರ್ಥಿಸಿ, ಕು. ವಿದ್ಯಾಶ್ರೀ ಮಾತಾಜಿ ಸ್ವಾಗತಿಸಿ, ಶ್ರೀಮತಿ ಗೀತಾ ಮಾತಾಜಿ ಧನ್ಯವಾದಗೈದರು. ಶ್ರೀಮತಿ ಅನುಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.