ಬಾಲಕರ್ಮಿಕ ಪದ್ದತಿ ತಡೆಯಲು ಕಾನೂನು ಮಾಹಿತಿ

ಓದುವ ವಯಸ್ಸಿನಲ್ಲಿರುವ ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸುವುದು ಶೋಷಣೆ ಮಾಡಿದಂತೆ. ಅದಕ್ಕೆ ಕಾನೂನಿನಲ್ಲಿ ಶಿಕ್ಷೆಯೂ ಇದೆ. ಅದಕ್ಕಾಗಿ ಮಕ್ಕಳೂ ಕಾನೂನು ಜ್ಞಾನ ಅರಿತುಕೊಳ್ಳಬೇಕು ಎಂದು ಪುತ್ತೂರು ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಎಸಿಜೆಎಂ ಸಿ.ಕೆ ಬಸವರಾಜ್ ರವರು ಹೇಳಿದರು.

balakarmika-virodhi-dina-4

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ ಜೂನ್ 12 ರಂದು ನಡೆದ, ಅಂತರ್ ರಾಷ್ಟ್ರೀಯ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಕುರಿತು ಕಾನೂನು ಮಾಹಿತಿ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಉಪಯೋಗಿಸಿದವರಿಗೆ 2 ವರ್ಷದ ತನಕ ಜೈಲು ಶಿಕ್ಷೆ ರೂ. 20 ಸಾವಿರ ದಂಡವಿದ್ದರೂ ಭಾರತದಲ್ಲಿ ಕಾರ್ಮಿಕರ ಶೋಷಣೆ ಕಡಿಮೆಯಾಗಿಲ್ಲ, ಮಕ್ಕಳನ್ನು ಹೊರರಾಜ್ಯಗಳಿಗೆ ಸಾಗಾಣೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ತೊಡಗಿಸುವುದು ಇವೆಲ್ಲವನ್ನು ತಡೆಯಬೇಕಾದರೆ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಬೇಕು ಎಂದರು.

balakarmika-virodhi-dina-3

balakarmika-virodhi-dina-1

balakarmika-virodhi-dina-2

ಇಷ್ಟ ಪಟ್ಟು ಓದಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ವಕೀಲರ ಸಂಘದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳರವರು ಮಾತನಾಡಿ ವಿದ್ಯಾರ್ಥಿಗಳು ಪೋಷಕರ ಒತ್ತಾಯಕ್ಕೆ ಮಣಿದು ಕಷ್ಟ ಪಟ್ಟು ಓದುವ ಬದಲು ಇಷ್ಟಪಟ್ಟು ಓದಿ. ಆಗ ನಿಮಗೆ ಹೆಚ್ಚಿನ ಮಹಿತಿ ಅರಿಯುತ್ತದೆ. ತ್ಯಾಗ, ಗುಅಣ, ಶೀಲ, ಕರ್ಮವನ್ನು ಪಾಲಿಸಿ ಎಂದರು.

ಶಿಕ್ಷಣದ ಮೂಲಕಾ ಮಕ್ಕಳ ಜ್ಞಾನ ವೃದ್ಧಿ : ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಂಚಾಲಕ ವಿನೋದ್ ಕುಮಾರ್ ರೈಯವರು ಮಾತನಾಡಿ ಮಕ್ಕಳಿಗೆ ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಅವರನ್ನು ಪ್ರೇರೆಪಿಸಬೇಕು. ಶಿಕ್ಷಣದ ಮೂಲಕ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.

ದ.ಕ ಜಿಲ್ಲೆಯಲ್ಲಿ ಯಾರೂ ಬಾಲಕಾರ್ಮಿಕರಿಲ್ಲ : ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ಧ ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ರವರು ಮಾತನಾಡಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದರೂ ದೇಶದಲ್ಲಿ ಬಾಲಕಾರ್ಮಿಕರು ಇದ್ದಾರೆ. ಆದರೆ ದ.ಕ ಜಿಲ್ಲೆಯಲ್ಲಿ ವಲಸೆಬಂದವರನ್ನು ಬಿಟ್ಟರೆ ಬೇರೆ ಯಾರೂ ಸ್ಥಳೀಯವಾಗಿ ಬಾಲಕಾರ್ಮಿಕರು ಕಂಡುಬಂದರೆ ನಿಮ್ಮ ಮುಖ್ಯ ಗುರುಗಳಲ್ಲಿ ಅಥವಾ ಯಾವುದೇ ಸರಕಾರಿ ಕಚೇರಿಗಳಿಗೆ ಮಾಹಿತಿ ನೀಡಿ ಕಾನೂನಾತ್ಮವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಮಂಜುನಾಥ ಎನ್.ಎಸ್. ತಾಲೂಕು ಕಾನೂನು ಸೇವೆಗಳ ಸಮಿತಿಯ ನಾರಾಯಣ ರೈ ಕುಕ್ಕುವಳ್ಳಿ, ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿ, ಸಹನಾ ಮಾತಾಜಿ ವಂದಿಸಿದರು.

Highslide for Wordpress Plugin