ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 7-6-2017 ರಂದು ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ ದೇಶದ ಹೆಮ್ಮೆಯ ಪ್ರತೀಕ, ಭವ್ಯ ಭಾರತದ ದಿವ್ಯ ಪುರುಷನಾದ ಶಿವಾಜಿಯವರ ಪಟ್ಟಾಭಿಷೇಕ ದಿನಾಚರಣೆಯ ನೆನಪಿಗಾಗಿ ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಮತ್ತು ಅವರು ನೀಡಿದ ಆದರ್ಶಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ನುಡಿದರು. ಶಿಕ್ಷಕಿ ಕು. ಲೀಲಾವತಿ ಹಂದ್ರಟ್ಟ ಮಾತಾನಾಡಿ ಶಿವಾಜಿಯವರ ಜೀವನ ಚರಿತ್ರೆ, ಅವರ ಸಾಹಸಮಯ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಶ್ರೀಮತಿ ನಳಿನಿ ವಾಗ್ಲೆ ಮತ್ತು ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.

vkms-hindu-samrajyotsava1

vkms-hindu-samrajyotsava

Highslide for Wordpress Plugin