ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ

ದಿನಾಂಕ 13-3-2017 ರಂದು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಆಯೋಜಿಸಿದ ಶಿಕ್ಷಣದಲ್ಲಿ ನವೀನ ಪರಿಕಲ್ಪನೆಯ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಗತಿ ತರುವ ದೃಷ್ಟಿಯಿಂದ ಪುತ್ತೂರು ಶಿಕ್ಷಣ ಇಲಾಖೆಯು ಆರಂಭಿಸಿದ ಮಿಷನ್ 95+ ಯೋಜನೆಯನ್ನು ಮಂಡಿಸಿ, ನ್ಯಾಶನಲ್ ಕಾನ್ಫರೆನ್ಸ್ ಆನ್ ಇನ್ನೋವೇಶನ್ಸ್ ಇನ್ ಎಜ್ಯುಕೇಶನಲ್ ಅಡ್ಮಿನಿಸ್ಟ್ರೇಶನ್ ಅಂಡ್ ಪ್ರೆಸೆಂಟೇಶನ್ ಆಫ್ ಅವಾರ್ಡ್, ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವೆಡ್ಕರ್ ಅವರಿಂದ ಸ್ವೀಕರಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಜಿ.ಎಸ್. ಶಶಿಧರ್ ಅವರನ್ನು ಅಭಿನಂದಿಸಲಾಯಿತು.

Abhinandana2

Abhinandana3
abhinandana1

ತಮ್ಮ ಅಭಿನಂದನಾ ಭಾಷಣದಲ್ಲಿ ನಮ್ಮ ಸಮಾಜದಲ್ಲಿ ಎಲ್ಲಾ ಸ್ತರದ ಮಕ್ಕಳಿದ್ದು, ಮಕ್ಕಳ ಮನೆ – ಮನ ಭೇಟಿ ಮೂಲಕ ಮಿಷನ್ 95+ನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಸಾಧ್ಯವಾಯಿತು. ಇದು ಕೇವಲ ಒನ್-ಮ್ಯಾನ್ – ಆರ್ಮಿ ಅಲ್ಲ ಇದು ಟೀಮ್ ವರ್ಕ್ ನಿಂದ ಸಾಧ್ಯವಾಯಿತು ಎಂದು ನುಡಿದರು.

ಆಂಗ್ಲಮಾಧ್ಯಮ ಶಾಲಾ ಅಧ್ಯಕ್ಷರಾದ ವೆಂಕಟೇಶ್ ಅಮೈ ಅವರು ಮಿಷನ್ 95+ ಎಂಬ ಸ್ಲೋಗನ್ ಪರಿವರ್ತನೆ ತರದು ಟೀಮ್ ವರ್ಕ್ ಮಾಡಿದರೆ ಅದು ಸಾಧ್ಯ. ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎನ್ನುವುದು ಎಷ್ಟು ಜನನಿತವೋ ಮಿಷನ್ 95+ ಹುಟ್ಟಿದ್ದು ಪುತ್ತೂರಿನಲ್ಲಿ ಎಂಬ ಮಾತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಅಧ್ಯಕ್ಷರಾದ ಅಚ್ಚುತ ನಾಯಕ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.

Highslide for Wordpress Plugin