ಬಾಲಭವನ ಸೊಸೈಟಿ ಕಬ್ಬನ್, ಉದ್ಯಾನವನ, ಬೆಂಗಳೂರು ಹಾಗೂ ಜಿಲ್ಲಾ ಬಾಲಭವನ ಸಮಿತಿ, ಬೆಳಗಾವಿ ಜಿಲ್ಲೆ ಇವರು ಬೆಳಗಾವಿ ಜಿಲ್ಲೆಯಲ್ಲಿ ನಡೆಸಿದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ರಾಮ್ ಪ್ರಸಾದ್ ಸೃಜನಾತ್ಮಕ ಕಲಾ ವಿಭಾಗದಲ್ಲಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಭವನ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಅಚಿಜಲಿ ನಿಂಬಾಳ್ಕರ್‌ರವರು ಪ್ರಶಸ್ತಿ ನೀಡಿ ಗೌರವಿಸಿದರು. ಇವರು ಕೆ.ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ ಪುತ್ರ ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ್ಯ ತರಬೇತಿ ನೀಡಿರುತ್ತಾರೆ.
