ಪರೀಕ್ಷೆಯನ್ನು ಸ್ನೇಹಿತನಂತೆ ಕಾಣಿ – ಬಿ.ವಿ ಸೂರ್ಯನಾರಾಯಣ

‘ಉತ್ತಮ ಪೂರ್ವ ತಯಾರಿಯೊಂದಿಗಿನ ಅಧ್ಯಯನವು ಪರೀಕ್ಷೆಯ ಬಗೆಗಿನ ಆತಂಕವನ್ನು ದೂರ ಮಾಡುತ್ತದೆ’ ಎಂದು ಸವಣೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ವಿ ಸೂರ್ಯನಾರಾಯಣ ಇವರು ನುಡಿದರು. ವಿವೇಕಾನಂದ ಕನ್ನಡ ಶಾಲಾ 10 ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಅಧ್ಯಯನದೊಂದಿಗೆ ದೈನಂದಿನ ಚಟುವಟಿಕೆಗಳ ಹಾಗೂ ಆಹಾರ ಕ್ರಮದ ಬಗ್ಗೆ ಗಮನ ಹರಿಸಬೇಕಾದ ಅಂಶಗಳನ್ನು ತಿಳಿಸಿದರು. ಮಕ್ಕಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ಪರೀಕ್ಷೆಯನ್ನು ಶತ್ರುವಂತೆ ಕಾಣದೆ ಮಿತ್ರನಂತೆ ಕಾಣಬೇಕು ಎನ್ನುವ ಕಿವಿ ಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

vkms-prg1

vkms-prg2

Highslide for Wordpress Plugin