ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಪಾಂಚಜನ್ಯದಲ್ಲಿ ಯಕ್ಷಗಾನ ತಾಳಮದ್ದಳೆ

ವಿವೇಕಾನಂದ ಕಾಲೇಜಿನ ’ಪಾಂಚಜನ್ಯ’ ಆಕಾಶವಾಣಿ ಕೇಂದ್ರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ’ಬಭ್ರುವಾಹನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

vkm-talamaddale

ಹಿಮ್ಮೇಳದಲ್ಲಿ – ಭಾಗವತರಾಗಿ ಚಿನ್ಮಯ ಕಲ್ಲಡ್ಕ, ಚೆಂಡೆವಾದನದಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಅಚಿಂತ್ಯ ಕೃಷ್ಣ 8ನೇ ತರಗತಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಜುನನಾಗಿ – ಪ್ರಣಮ್ಯ 7ನೇ ತರಗತಿ, ಹಂಸಧ್ವಜನಾಗಿ – ಭವಿಷ್ 6ನೇ ತರಗತಿ, ಬಭ್ರುವಾಹನನಾಗಿ – ಶ್ರೀಹರಿ – 7ನೇ ತರಗತಿ, ಕೃಷ್ಣನಾಗಿ ಆದಿತ್ಯನಾರಾಯಣ 6ನೇ ತರಗತಿ, ಚಿತ್ರಾಂಗದೆಯಾಗಿ ಕು. ಧಾತ್ರಿ ಆರ್‌ ರೈ 5ನೇ ತರಗತಿ, ಮಂತ್ರಿ ಮತ್ತು ವೃಷಕೇತುವಾಗಿ- ಮಿಥುನ್ ವಿ.ಕೆ 5ನೇ ತರಗತಿ, ಚಿತ್ರಕೇತುವಾಗಿ ಪ್ರಣವ 5ನೇ ತರಗತಿ, ಪ್ರದ್ಯುಮ್ನ ಮತ್ತು ಚಿತ್ರರಥನಾಗಿ- ಯತೀನ್ 7ನೇ ತರಗತಿ ಸಹಕರಿಸಿದರು.

ಈ ಕಥಾಭಾಗದ ನಿರ್ದೇಶಕರಾಗಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಇದರ ಸಂಚಾಲಕಿ ಶ್ರೀಮತಿ ಪದ್ಮಾ ಕೆ. ಆರ್. ಆಚಾರ್ ಸಹಕರಿಸಿದರು. ಕಾರ್ಯಕ್ರಮವು ಶಾಲಾ ಸಹಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ ನಿಡ್ವಣ್ಣಾಯ ಮತ್ತು ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಮತ್ತು ಶಿಕ್ಷಕ ವೃಂದದವರ ಪ್ರೋತ್ಸಾಹದೊಂದಿಗೆ ನಡೆಯಿತು.

Highslide for Wordpress Plugin