ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಶರ್ಮ (ಸಾಲ್ಮರ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿಗಳ ಪುತ್ರ) 17ರ ವಯೋಮಾನದ ವಿಭಾಗದ 45 ಕೆ.ಜಿ. ಕುಮಿಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ವಿಘ್ನೇಶ್ ಆರ್. (ಬಪ್ಪಳಿಗೆ ರಾಮಕೃಷ್ಣ ಹಾಗೂ ಜಯಲಕ್ಷ್ಮೀ ದಂಪತಿಗಳ ಪುತ್ರ) 17 ರ ವಯೋಮಾನದ ವಿಭಾಗದ 60 ಕೆ.ಜಿ. ಕುಮಿಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ. ಇವರಲ್ಲಿ ಸಾತ್ವಿಕ್ ಶರ್ಮ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.
