ಕುಶಲತೆ ಮತ್ತು ಪರಿಶ್ರಮದ ಕೆಲಸ ಅಗತ್ಯ – ನಿಖಿಲ ಸುಮಾ

ಸಮಾಜದಲ್ಲಿ ಇತರರು ತಮ್ಮನ್ನು ಗುರುತಿಸುವಂತಾಗಲು ವಿದ್ಯಾರ್ಥಿಗಳು ಕುಶಲತೆ ಮತ್ತು ಪರಿಶ್ರಮವೆರಡನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಸ್ತುತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು. ನಿಖಿಲ ಸುಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಮುಖ್ಯಾತಿಥಿಯಾಗಿ ಆಗಮಿಸಿ ಮಾತನಾಡಿದರು.

pratibha-puraskara-2

pratibha-puraskara-4

pratibha-puraskara-5

pratibha-puraskara-6

pratibha-puraskara

pratibha-puraskara-1

pratibha-puraskara-3

ಇನ್ನೊರ್ವ ಮುಖ್ಯ ಅತಿಥಿಯಾದ ದ.ಕ ಜಿಲ್ಲಾ ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಮಾತನಾಡುತ್ತಾ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಸಾಧಕರಿಗೆ ವೇದಿಕೆ ಸಿಗುತ್ತದೆ ಎಂದರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವಸಂತ ಸುವರ್ಣ ಸಭಾಧ್ಯಕ್ಷರ ನೆಲೆಯಲ್ಲಿ ಮಾತನಾಡುತ್ತಾ ಶಿಕ್ಷಕರ ಪರಿಶ್ರಮದಿಂಂದ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯು ಪ್ರಕಾಶಿಸಲು ಸಾಧ್ಯವಾಗಿ ಹೊಸ ಸಾಧನೆಗಳಿಗೆ ಪ್ರೋತ್ಸಾಹ ದೊರಕಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ನುಡಿದರು.

ಕಾರ್ಯಕ್ರಮದ ಜೊತೆಜೊತೆಗೆ ಸ್ವರೂಪ ಅಧ್ಯಯನ ಕೇಂದ್ರದ ತಂಡದವರಿಂದ ಬೀಟ್ ಬಾಕ್ಸಿಂಗ್, ಮಿಮಿಕ್ರಿ, ರಂಗಗೀತೆಯಂತಹ ವಿಶಿಷ್ಠ ಕಾರ್ಯಕ್ರಮವೂ ನೆರೆದವರ ಮನರಂಜಿಸುತ್ತಾ ಸಾಗಿದವು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸಂಧ್ಯಾ ಕಜೆ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕುಡ್ವ ಪ್ರಾರ್ಥಿಸಿ ಶ್ರೀಮತಿ ನಳಿನಿ ವಾಗ್ಲೆ ಸ್ವಾಗತಿಸಿದರು. ಶ್ರೀಮತಿ ಪೂರ್ಣಿಮಾ ಮಾತಾಜಿ ಧನ್ಯವಾದ ಸಮರ್ಪಿಸಿ, ಶ್ರೀಮತಿ ಸೌಮಶ್ರೀ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin