ಸಮಗ್ರ ಪ್ರಶಸ್ತಿಯೊಂದಿಗೆ – ರಾಜ್ಯಮಟ್ಟಕ್ಕೆ ಆಯ್ಕೆ

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಸುಳ್ಯದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ಒಟ್ಟು 23 ಪ್ರಶಸ್ತಿಗಳನ್ನು 13 ಕ್ರೀಡಾಪಟುಗಳು ಪಡೆದು 10 ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಮತ್ತೊಮ್ಮೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದರೊಂದಿಗೆ ಪುತ್ತೂರು ತಾಲೂಕಿನ ಗರಿಮೆಯನ್ನು ಹೆಚ್ಚಿಸಿದೆ. ಇವರಿಗೆ ಶ್ರೀ ಪ್ರೇಮನಾಥ್ ಶೆಟ್ಟಿ, ಶ್ರೀ ದಾಮೋದರ್, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಮಮತಾ ತರಬೇತಿ ನೀಡಿರುತ್ತಾರೆ.

intex_aqua_air_20161115_174004

ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು, ಚೈತ್ರಾ.ಪಿ (ಹಳೆನೇರಂಕಿ ಲಕ್ಷ್ಮಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ), ದೀಕ್ಷಾ.ಕೆ (ಪೆರಿಗೇರಿ, ಕನ್ನಾಯ ದರ್ಬೆ ಕಮಲಾಕ್ಷ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ), ನವ್ಯ (ಕಾವು ಪಿಲಿಪಂಜರ ಅಣ್ಣಿಪೂಜಾರಿ ಮತ್ತು ಲೀಲಾವತಿ ದಂಪತಿಗಳ ಪುತ್ರಿ), ಶ್ರದ್ಧಾ ಎಂ (ಅಜೇಯನಗರ ಮನೋಜ್ ಕುಮಾರ್ ಮತ್ತು ಅನುರಾಧ ದಂಪತಿಗಳ ಪುತ್ರಿ), ಧನುಷಾ ಶೆಟ್ಟಿ (ಗೋವಿಂದ ಮೂಲೆ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ದಂಪತಿಗಳ ಪುತ್ರಿ), ಪ್ರಶಾಂತಿ (ಚೋಮ ಮತ್ತು ಕಮಲ ದಂಪತಿಗಳ ಪುತ್ರಿ), ಆಯಿಷತುಲ್ ಆಸಿಫಾ (ಅಬ್ದುಲ್ ರಝಕ್ ಮತ್ತು ಆಸ್ಮಾ ದಂಪತಿಗಳ ಪುತ್ರಿ), ಹಿತಾಶ್ರೀ (ಕುದ್ಕುಳಿ ಮನೆ ಕೃಷ್ಣಪ್ಪ ಗೌಡ ಮತ್ತು ಉಷಾ ದಂಪತಿಗಳ ಪುತ್ರಿ), ಕೃತಿ ಶೆಟ್ಟಿ(ಗೋವಿಂದ ಮೂಲೆ ಉದಯ್ ಕುಮಾರ್ ಶೆಟ್ಟಿ ಮತ್ತು ವೈಶಲತಾ ದಂಪತಿಗಳ ಪುತ್ರಿ)ರುಚಿತಾ ಕೆ.ಎಂ (ಕುದ್ಕುಳಿ ಮಂಜುನಾಥ ಮತ್ತು ಹರ್ಷಕುಮಾರಿ ದಂಪತಿಗಳ ಪುತ್ರಿ), ಗಾಯತ್ರಿ ಕೆ.ಎನ್ (ಕಲ್ಲಪಾಪು ನಿರಂಜನ ಮತ್ತು ಸುನಂದ ಕೆ.ಎನ್ ದಂಪತಿಗಳ ಪುತ್ರಿ), ಶಿಲ್ಪಾಶ್ರೀ (ಬರೆಂಬೆಟ್ಟು ಜತ್ತಪ್ಪ ಗೌಡ ಮತ್ತು ಜಯಶೀಲ ದಂಪತಿಗಳ ಪುತ್ರಿ) ಹೃತಿಕ್ ( ಬಿರಾವು ಹರೀಶ್ ಪೂಜಾರಿ ಮತ್ತು ಯಶೋಧ ದಂಪತಿಗಳ ಪುತ್ರಿ).

Highslide for Wordpress Plugin