ಉತ್ತರ ಪ್ರದೇಶದ ಗಜಿಯಾಬಾದ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ವಿದ್ಯಾಭಾರತಿಕರ್ನಾಟಕ ವತಿಯಿಂದ ನಡೆದರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದಿರುತ್ತಾರೆ. 17 ವರ್ಷದ ಒಳಗಿನ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದಂತಹ 8 ತಂಡಗಳಲ್ಲಿ ಈ ವಿಭಾಗ ಸ್ಪರ್ಧಿಸಿದ್ದು ಶಾಲಾ ತಂಡ ಪ್ರಥಮ ಸ್ಥಾನದೊಂದಿಗೆ ನವೆಂಬರ್ ನಲ್ಲಿಛತ್ತೀಸ್‌ಗಡ್‌ನಲ್ಲಿ ನಡೆಯಲಿರುವ ಸ್ಕೂಲ್‌ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ.

ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ತರಬೇತುದಾರರಾಗಿ ಹಾಗೂ ಕ್ರೀಡಾಕೂಟದಲ್ಲಿ ಧನ್ಯಶ್ರೀ (ಅಜೇಯನಗರ ನಿವಾಸಿ ಈಶ್ವರಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ), ಗುಣಶ್ರೀ (ಕೋಡಿ ಮನೆ ಮೋನಪ್ಪಗೌಡ ಮತ್ತು ನಳಿನಿ ದಂಪತಿಗಳ ಪುತ್ರಿ), ಗೀತಶ್ರೀ (ಕೋಡಿ ಮನೆ ಮೋನಪ್ಪಗೌಡ ಮತ್ತು ನಳಿನಿ ದಂಪತಿಗಳ ಪುತ್ರಿ), ಭಾಗ್ಯಶ್ರೀ (ಮಣಿಯಡ್ಕ ನಿವಾಸಿ ನಾರಾಯಣ ನಲ್ಕೆ ಮತ್ತು ಲೀಲಾ ದಂಪತಿಗಳ ಪುತ್ರಿ), ಅನುಶ್ರೀ (ಪಡ್ಡಾಯೂರು ನಿವಾಸಿ ಬಾಲಕೃಷ್ಣ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರಿ), ಕಾವ್ಯಶ್ರೀ (ಲಿಂಗದಗುಡ್ಡೆ ನಿವಾಸಿ ಉಮೇಶ್ ಗೌಡ ಮತ್ತು ಗೀತಾ ದಂಪತಿಗಳ ಪುತ್ರಿ), ಸ್ವಾತಿಎನ್ (ಸಿಟಿಗುಡ್ಡೆ ನಿವಾಸಿ ಮೋಹನ ಆಚಾರ್ಯ ಮತ್ತುರೇವತಿ ದಂಪತಿಗಳ ಪುತ್ರಿ), ಅಪೂರ್ವ (ಪೆರಿಯತ್ತೋಡಿ ನಿವಾಸಿ ಕೇಶವ ಪೂಜಾರಿ ಮತ್ತುರಾಧಾ ದಂಪತಿಗಳ ಪುತ್ರಿ), ರಶ್ಮಿತಾ(ಬಾರೆಕೊಲಾಡಿ ನಿವಾಸಿ ಬಿ.ಕೆ ಸುಂದರ ನಾಯ್ಕ ಮತ್ತು ಪ್ರಸನ್ನಕುಮಾರಿ ದಂಪತಿಗಳ ಪುತ್ರಿ), ಫಾತಿಮತ್ ಅಫಿಜಾ (ನಿಕ್ಕಲು ನಿವಾಸಿ ಕೆ. ಜುಬೈರ್ ಮತ್ತು ಆಸ್ಮಾ.ಬಿ ದಂಪತಿಗಳ ಪುತ್ರಿ), ಚೈತ್ರಾ (ಇಂದಿರಾನಗರ ನಿವಾಸಿ ಬಿ.ಎಸ್ ಬಾಬು ಪೂಜಾರಿ ಮತ್ತು ಸುಶೀಲ ದಂಪತಿಗಳ ಪುತ್ರಿ), ನವ್ಯ(ಬಂದಾರು ನಿವಾಸಿ ಗಂಗಾಧರ ಮತ್ತು ಸರಸ್ವತಿ ದಂಪತಿಗಳ ಪುತ್ರಿ) ಭಾಗವಹಿಸಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಪೋಷಕ ವೃಂದ, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿ ವೃಂದ ಶಾಲಾ ಸಾಧನೆಯನ್ನು ಪ್ರಶಂಶಿಸಿರುತ್ತಾರೆ.