ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಪ್ರಥಮ

ತಿರುವನಂತಪುರಂ ಪಾರಶಾಲದ ಸರಸ್ವತಿ ವಿದ್ಯಾಪೀಠ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ರಾಷ್ಟ್ರಮಟ್ಟದ ೧೪ರ ಕೆಳಗಿನ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ.

ಭಾರತದ ವಿವಿಧ ರಾಜ್ಯಗಳಿಂದ ಬಂದಂತಹ 8 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಒಲಿಂಪಿಯನ್ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಉದ್ಫಾಟಕರಾಗಿ ಆಗಮಿಸಿದ್ದರು. ತಂಡದಲ್ಲಿ ದೀಕ್ಷಿತಾ, ಶರಣ್ಯ, ಧನ್ಯಶ್ರೀ, ಸಿಂಚನಾ, ಧನ್ಯಶ್ರೀ, ರಚನಾ, ಶ್ವೇತಾ, ಮೋಕ್ಷಿತಾ, ರಶ್ಮಿ, ಯಶಸ್ವಿ, ಸನ್ಮಿತಾ ಭಾಗವಹಿಸಿದ್ದು ನವೆಂಬರ್ 16 ರಂದು ಮಧ್ಯಪ್ರದೇಶದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

kabaddi-team

20161021_132535

Highslide for Wordpress Plugin