ತಾಲೂಕು ಮಟ್ಟದ ಪ್ರತಿಭಾ ಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಉಪ್ಪಿನಂಗಡಿಯ ಸೈಂಟ್ ಮೇರಿಸ್ ಮತ್ತು ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕಿರಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

lower-Primary

Higher-Primary

ವಿಜೇತರ ವಿವರ:
ಕಿರಿಯರ ವಿಭಾಗ : ಅಗಮ್ಯ – ಚಿತ್ರಕಲೆ – ಪ್ರಥಮ ಸ್ಥಾನ , ತನ್ಮಯಿ ವಾಗ್ಲೆ – ಕಥೆ ಹೇಳುವುದು – ತೃತೀಯ ಸ್ಥಾನ, ಧನ್ಯ ಮತ್ತು ತಂಡ – ಕವ್ವಾಲಿ – ಪ್ರಥಮ ಸ್ಥಾನ,

ಹಿರಿಯರ ವಿಭಾಗ : ಪರೀಕ್ಷಿತ್ – ಯಕ್ಷಗಾನ – ದ್ವಿತೀಯ ಸ್ಥಾನ, ಕ್ಷಮಾ – ಕಥೆ ಹೇಳುವುದು – ದ್ವಿತೀಯ ಸ್ಥಾನ, ಶಿಶಿರ್ – ಕ್ಲೇಮಾಡೆಲ್ – ದ್ವಿತೀಯ ಸ್ಥಾನ, ಮಧ್ವಿ ಮತ್ತು ತಂಡ – ಕವ್ವಾಲಿ – ಪ್ರಥಮ ಸ್ಥಾನ, ಆದರ್ಶ ಮತ್ತು ತಂಡ – ರಸಪ್ರಶ್ನೆ – ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.

Highslide for Wordpress Plugin