ಅಖಿಲ ಭಾರತೀಯ ಜ್ಞಾನ ವಿಜ್ಞಾನ ಮೇಳ, ವಿದ್ಯಾಭಾರತಿಕರ್ನಾಟಕಇದರ ವತಿಯಿಂದ ಶಾರದಾ ವಿದ್ಯಾಲಯ, ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಕಿಶೋರ ವರ್ಗದ ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಬಲ್ನಾಡು ನಿವಾಸಿ ಚಂದ್ರಶೇಖರ ಭಟ್ ಮತ್ತು ಮಹಾಲಕ್ಷ್ಮೀ ದಂಪತಿಗಳ ಪುತ್ರ ಸ್ಕಂದ ನಾರಾಯಣ, ಆನಡ್ಕ ನಿವಾಸಿ ವಿಜಯ ಪೂಜಾರಿ ಮತ್ತು ಶ್ರೀಮತಿ ವಿಜಯ ದಂಪತಿಗಳ ಪುತ್ರ ವಿಶ್ರಾಂತ್ ಮತ್ತು ಕೆದಿಲ ನಿವಾಸಿ ಕೇಶವಪ್ರಸಾದ ಮತ್ತು ಪ್ರತಿಮಾ ದಂಪತಿಗಳ ಪುತ್ರ ಪ್ರಣವ ಇವರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
