ಪ್ರತಿಭೆ ಎಂಬುದು ಮಕ್ಕಳಲ್ಲಿ ಹುದುಗಿರುತ್ತದೆ ಅದು ಕಾರಂಜಿಯಂತೆ ಚಿಮ್ಮಲು ಪ್ರತಿಭಾ ಕಾರಂಜಿಯ ಈ ವೇದಿಕೆಯು ಸಹಕರಿಸುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ನಗರ ಸಭಾಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದಕ ನ್ನಡ ಮಾಧ್ಯಮ ಶಾಲಾ ಸಂಚಾಲಕ ಶ್ರೀ ರವೀಂದ್ರ ಪಿ. ಇವರು ನುಡಿದರು.




ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಉಷಾ ಭಟ್, ನಗರಸಭಾ ಸದಸ್ಯರಾದ ಶ್ರೀಮತಿ ಕಮಲ ಆನಂದ್, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ತನುಜಾ, ಶಾಲೆಯ ಪ್ರೌಢವಿಭಾಗದ ಪ್ರಭಾರ ಮುಖ್ಯಗುರುಗಳಾದ ಕು.ಲೀಲಾವತಿ , ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾಲಿನಿ ಸ್ವಾಗತಿಸಿ, ಕು. ವಿದ್ಯಾಶ್ರೀ ವಂದಿಸಿದರು. ಶ್ರೀಮತಿ ಉಮಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.