ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ಡಾ| ಅಬ್ದುಲ್ ಕಲಾಂರವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಮಾತನಾಡುತ್ತಾ, ಕಲಾಂರವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಆದರ್ಶಗಳನ್ನು ಮೈಗೂಡಿಸುವುದರ ಜೊತೆಗೆ ಈ ದೇಶದ ಬಗ್ಗೆ ಕನಸುಗಳನ್ನು ಹೊತ್ತಿರುವ ಒರ್ವ ಶ್ರೇಷ್ಠ ವಿಜ್ಞಾನಿ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಾದ ಶ್ರೀಪ್ರದ, ತೀರ್ಥರಾಜ್, ಸ್ಕಂದನಾರಾಯಣ, ಕು. ಪೃಥಾ ರವರು ಕಲಾಂರವರ ಬಾಲ್ಯ ಜೀವನ, ವಿದ್ಯಾಭ್ಯಾಸ ಮತ್ತು ಆದರ್ಶತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ಶುಭ ಆಚಳ್ಳಿ ನೆರವೇರಿಸಿದರು.



