ಪ್ರಕೃತಿಯ ಕಣಕಣದಲ್ಲಿಯೂ ಗುರು ನೆಲೆಸಿದ್ದಾನೆ – ಅಮೃತ ವರ್ಷಿಣಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಗುರುಪೂಜಾ’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೂರ್ಕಜೆ ಗುರುಕುಲದ ಮಾತಾಜಿಯವರಾದ ಶ್ರೀಮತಿ ಅಮೃತವರ್ಷಿಣಿಯವರು ಬೌದ್ಧಿಕ್ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ಮಾತನಾಡುತ್ತಾ ಶಿಲ್ಪಿಯು ಕಲ್ಲನ್ನು ಸುಂದರವಾದ ಮೂರ್ತಿಯನ್ನಾಗಿ ಮಾಡಿದಂತೆ ಗುರುವು ಶಿಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ನಮ್ಮೊಳಗಿನ ಭಗವಂತನನ್ನು ಕಾಣಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ವೇದಿಕೆಯಲ್ಲಿ ಸಭಾಧ್ಯಕ್ಷರಾದ ಶಾಲಾ ಪೋಷಕರಾದ ಯೋಗೀಶ್ವರಿ ಜಯಪ್ರಕಾಶ್, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕುಡ್ವ ಪ್ರಾರ್ಥಿಸಿ, ದಾಕ್ಷಾಯಿಣಿ ಮಾತಾಜಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

20160708_105826

20160708_105544

20160708_103246

20160708_103212

Highslide for Wordpress Plugin