ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿಸಾಹಿತ್ಯ ಸಂಘದ ಆಶ್ರಯದಲ್ಲಿ ಕುಮಾರವ್ಯಾಸ ಭಾರತದ ಮತ್ತು ಹರಿಶ್ಚಂದ್ರ ಕಾವ್ಯದ ಕೆಲವು ಭಾಗಗಳನ್ನು ಆಯ್ದು ಕಾವ್ಯವಾಚನ ಮತ್ತು ಪ್ರವಚನವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಾಚನವನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ವ್ಯಾಖ್ಯಾನವನ್ನು ಕಟೀಲು ಮೇಳದ ಪ್ರಸಿದ್ಧ ಕಲಾವಿದರಾದ ಶ್ರೀ ಅಪ್ಪಕುಂಞ ಯಾದವ್ ಮಿಂಚಿಪದವುರವರು ಪ್ರಸ್ತುತ ಪಡಿಸಿದರು. ಹಾರ್ಮೋನಿಯಂನಲ್ಲಿ ಶ್ರೀ ಲಿಂಗಪ್ಪಗೌಡ ಪುತ್ತೂರುರವರು ಸಹಕರಿಸಿದ್ದರು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

