ದಿನಾಂಕ 10-06-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೃತ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರು ಯಕ್ಷ- ಶಿಕ್ಷಣ ತರಗತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯಕ್ಷ- ಶಿಕ್ಷಣ ನಿಂತ ನೀರಲ್ಲ ಅದು ಸದಾ ಪ್ರವಹಿಸುತ್ತಿರುವ ಸಾಗರ ಎಂದು ನುಡಿದರು. ತರಬೇತಿ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮವನ್ನು ನೇರವೇರಿಸಿದರು.

