ಇಂಗ್ಲಿಷ್ ಭಾಷೆಯನ್ನು ಕಲಿತು ಮನನ ಮಾಡಿಕೊಂಡಾಗ ವ್ಯಾವಹಾರಿಕವಾಗಿ ಅಗತ್ಯವಿದ್ದಲ್ಲಿ ಬಳಸಿಕೊಂಡು ಜೀವನವನ್ನು ಸುಧಾರಿಸಿಕೊಳ್ಳಬಹುದು ಎಂದು ಅಂಬಿಕಾ ಬಾಲ ವಿದ್ಯಾಲಯದ ಮುಖ್ಯಗುರುಗಳಾದ ಶ್ರೀಮತಿ ಸುಜನಿ ಬೋರ್ಕರ್‌ರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ 7 ಮತ್ತು 8 ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 5 ದಿನಗಳ ’ಸುಲಭ – ಸರಳ, ಇಂಗ್ಲಿಷ್ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಶಿಬಿರಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.






ಶಿಬಿರದಲ್ಲಿ ಆಂಗ್ಲ ಭಾಷೆಗೆ ಸಂಬಂಧಿಸಿ, ಪರಿಣಾಮಕಾರಿ ಸಂವಹನ, ಚಟುವಟಿಕಾತ್ಮಕ ಕಲಿಕೆ ವ್ಯಾಕರಣ, ಮನೋರಂಜನಾ ಆಟಗಳು, ಕರಕುಶಲ ಕಲೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಶಿಬಿರಸಂಪನ್ಮೂಲ ವ್ಯಕ್ತಿಗಳಾಗಿದ್ದ ಶ್ರೀಮತಿ ಅನುರಾಧ ಮತ್ತು ಶ್ರೀಮತಿ ರಶ್ಮಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿ ಮಾತಾಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಾದ ಕು. ಪೃಥಾ ಮತ್ತು ಕು. ಅಪೂರ್ವ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ವೀಣಾ ನಿರೂಪಿಸಿದರು. ಶ್ರೀಮತಿ ಭವ್ಯ ಸ್ವಾಗತಿಸಿ, ಶ್ರೀಮತಿ ಅನುಷಾ ವಂದಿಸಿದರು.
ಆಂಗ್ಲ ಭಾಷಾ ಕಲಿಕೆಗೆ ಸಹಜ ಪರಿಸರ ಒದಗಿಸಿ ಮಕ್ಕಳಲ್ಲಿ ಭಾಷಾ ಬೆಳವಣಿಗೆಯನ್ನು ನಿರಂತರ ಪ್ರೋತ್ಸಾಹಿಸುವ ಕೆಲಸ ವಿವೇಕಾನಂದ ಕನ್ನಡ ಶಾಲೆಯಲ್ಲಿ ನಡೆಯುತ್ತಿದೆ.
ಕೃಷ್ಣವೇಣಿ – ಶಿಬಿರ ಸಂಪನ್ಮೂಲ ವ್ಯಕ್ತಿ