ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕಾರ್ಯಾಗಾರದಲ್ಲಿ ಮುಖವರ್ಣಿಕೆ ತರಬೇತಿಯನ್ನು ಖ್ಯಾತ ಕಿರೀಟ ವೇಷದಾರಿ ಶ್ರೀ ಜನಾರ್ಧನ ಬದಿಯಡ್ಕ ನೀಡಿದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆಯಲ್ಲಿ ಶಿಬಿರಾರ್ಥಿಗಳ ಪೋಷಕರು ಮತ್ತು ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು.

