ಕಲೆ ಸುದೀರ್ಘ ತಪಸ್ಸು – ಎಂ. ನಾ. ಚಂಬಲ್ತಿಮಾರ್

ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ವಾಕ್ಪಟುತ್ವ ಮುಂತಾದ ಕಲೆಗಳ ಸಮಾಗಮದಿಂದ ರೂಪುಗೊಂಡ ಕಲಾ ಪರಿಕರವೇ ಯಕ್ಷಗಾನ. ಇದು ಸುದೀರ್ಘ ತಪಸ್ಸು ಎಂದು ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ಚಂಬಲ್ತಿಮಾರ್‌ರವರು ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರ ಮತ್ತು ’ಛತ್ರಪತಿ ಶಿವಾಜಿ’ ಎಂಬ ಮಕ್ಕಳ ಯಕ್ಷಗಾನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಮಾತನ್ನು ನುಡಿದರು.

20160329_095129

20160329_100406

20160329_101143

20160329_103605

20160329_103924

ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಹಾಸ್ಯ ಕಲಾವಿದರಾದ ಶ್ರೀ ನಾರಾಯಣ ಭಟ್ ಪೆರ್ವೋಡಿ ತಮ್ಮ ಜೀವನಗಾಥೆಯನ್ನು ತೆರೆದಿಟ್ಟರು. ಇದೇ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಪ್ರಸಂಗ’ಛತ್ರಪತಿ ಶಿವಾಜಿ’ಯ ಪದ್ಯ ರಚನೆಗಾರರಾದ ಶ್ರೀ ವಿಷ್ಣು ಭಟ್.ಪಿ ರವರ ಸಮ್ಮುಖದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪುಸ್ತಕದ ಬಗೆಗೆಗಿನ ತಮ್ಮ ಅನುಭವವನ್ನು ಶ್ರೀಯುತರು ಹಂಚಿಕೊಂಡರು. ಇವರನ್ನು ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಾಟ್ಯ ಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಮುಖ್ಯು ಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ, ಪ್ರಾಸ್ತಾವಿಕ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ್‌ರವರು ನೆರವೇರಿಸಿದರು. ಬಳಿಕಾ ಅತಿಥಿಗಳಲ್ಲಿ ಯಕ್ಷ ವಿದ್ಯಾರ್ಥಿಗಳು ಯಕ್ಷಗಾನ ನಡೆದು ಬಂದ ದಾರಿಯ ಬಗ್ಗೆ ಸಂವಾದ ನಡೆಸಿದರು.

Highslide for Wordpress Plugin