ಶಾಲಾ ವಿದಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದ ರಾಜ್ಯಮಟ್ತದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಾದ ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ -ದೀಕ್ಷಾ, ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ- ಯುಕ್ತಿಕಾ, ಹಳೆನೆರೇಂಕಿಯ ಲಕ್ಷಣ ಗೌಡ ಮತ್ತು ಹೇಮಾಲತಾರವರ ಪುತ್ರಿ ಚೈತ್ರಾ.ಪಿ, ತಿಂಗಳಾಡಿಯ ಅಬ್ದುಲ್ ರಜಾಕ್ ಮತ್ತು ಅಸ್ಮ.ಕೆ ಟಿ. ರವರ ಪುತ್ರಿ ಇವರ ಆಯಿಷತ್‌ಲ್ ಆಸಿಫಾ ಇವರು 4×100 ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜನವರಿಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ್, ಶ್ರೀಮತಿ ಹರಿಣಾಕ್ಷಿ ಮತ್ತು ಕು.ಮಮತಾ ತರಬೇತಿ ನೀಡಿರುತ್ತಾರೆ.

students4

Highslide for Wordpress Plugin