’ವಿಜ್ಞಾನ ಮತ್ತು ಗಣಿತದ ಸಮನ್ವಯ ಈ ತತ್ವದ ಆಧಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಾರಾಡಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

’ಆರೋಗ್ಯ ಪೌಷ್ಠಿಕತೆ ಸ್ವಚ್ಛತೆ’ ಈ ವಿಷಯದ ಮಾದರಿ ತಯಾರಿಯಲ್ಲಿ ಅಬಕಾರಿ ಉಪನಿರೀಕ್ಷಕ ವಿಶ್ವನಾಥ ಪಿ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ .ಪಿ.ವಿ ಮತ್ತು ನಿರ್ಪಾಡಿ ನಿವಾಸಿ ಜಗನ್ನಾಥ ರೈ ಮತ್ತು ಮೋಹಿನಿ ಜೆ ರೈ ದಂಪತಿ ಪುತ್ರ ಅಕ್ಷಯ್ ರೈ ಎನ್ ಇವರ ತಂಡ ಪ್ರಥಮ ಸ್ಥಾನ ಪಡೆದಿದೆ. ಮತ್ತು ’ಸಂಪನ್ಮೂಲ ನಿರ್ವಹಣೆ’ ಈ ಮಾದರಿ ತಯಾರಿಯಲ್ಲಿ ಬಲ್ನಾಡು ಉಳ್ಳಾಲ್ತಿ ದೈವಸ್ಥಾನದ ಕಾರ್ಯದರ್ಶಿ ಚಂದ್ರಶೇಖರ ಭಟ್.ಎನ್ ಮತ್ತು ಮಹಾಲಕ್ಷ್ಮೀ.ಪಿ ದಂಪತಿ ಪುತ್ರ ಸ್ಕಂದನಾರಾಯಣ ಎನ್ ಹಾಗೂ ಕೆದಿಲ ನಿವಾಸಿ ಕೇಶವ ಪ್ರಸಾದ್ ಮತ್ತು ಪ್ರತಿಮಾ ದಂಪತಿ ಪುತ್ರ ಪ್ರಣವ.ಕೆ ಇವರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಹಾಗೂ ’ಕೈಗಾರಿಕೆ’ ಈ ಮಾದರಿ ತಯಾರಿಯಲ್ಲಿ ಪಂಜಳ ನಿವಾಸಿ ಕೊಂಕಣ್ ಗ್ಯಾಸ್ ಮಾರಾಟ ಅಧಿಕಾರಿ ಡೊಂಬಯ ಗೌಡ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ದಾಕ್ಷಾಯಿಣಿ ದಂಪತಿ ಪುತ್ರಿ ರಕ್ಷಿತಾ.ಡಿ ಹಾಗೂ ಪರ್ಲಡ್ಕ ನಿವಾಸಿ ಕೃಷ್ಣಪ್ಪ ಕುಲಾಲ್ ಮತ್ತು ಮೀನಾಕ್ಷಿ ದಂಪತಿ ಪುತ್ರಿ ಗೀತಾ.ಕೆ. ಎಂ ಇವರ ತಂಡ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.