ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ವಿಕಾಸ ಪ್ರೌಢಶಾಲೆ ಶಿವಮೊಗ್ಗ ಇಲ್ಲಿ ನಡೆದ ಪ್ರಾಂತೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಅಬಕಾರಿ ಉಪನೀರಿಕ್ಷಕ ವಿಶ್ವನಾಥ ಪಟ್ಟೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ ಪಿ.ವಿ. ಮತ್ತು ಬಲ್ನಾಡು ಗಿರಿಯಪ್ಪ ಬಿ. ಮತ್ತು ಲಲಿತಾ ದಂಪತಿಗಳ ಪುತ್ರ ಧನುಷ್.ಬಿ ಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.
