ಗುರುವಂದನೆ

ದಿನಾಂಕ 6-10-2015 ರಂದು ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು ಈಗ ನಿವೃತ್ತ ಶಿಕ್ಷಕರಾಗಿರುವ ಶ್ರೀಯುತ ಜನಾರ್ದನ ಪೂಜಾರಿಯವರಿಗೆ ಅವರ ವಸತಿಗೆ ತೆರಳಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 10 ನೇ ತರಗತಿ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ಬಳಗ ಗುರುವಂದನೆಯನ್ನು ಸಲ್ಲಿಸಿದರು.

12063310_673232609485335_6836831326625869076_n

20151006_105427

ಗುರುವಂದನೆ ಸ್ವೀಕರಿಸಿದ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ವಾರ್ತಾಪತ್ರಿಕೆ ಓದಿ ಪ್ರಚಲಿತ ವಿಷಯದ ಜ್ಞಾನ ಸಂಪನ್ನತೆಯನ್ನು ಪಡೆಯಿರಿ, ಕಲಿಕೆಯನ್ನು ವೇಳಾಪಟ್ಟಿಯೊಂದಿಗೆ ಜೋಡಿಸಿಕೊಂಡಾಗ ಕಲಿಕಾ ಫಲಿತಾಂಶ ಉತ್ತಮವಾಗುವುದು. ದುಶ್ಚಟಕ್ಕೆ ಬಲಿಯಾಗಬೇಡಿ ನಿಮ್ಮನ್ನು ಸಾಕಿ ಸಲಹಿ ನಿಮ್ಮ ಶ್ರೇಯಸ್ಸನ್ನೇ ಸದಾ ಬಯಸುತ್ತಿರುವ ಪೋಷಕರ ಸಂಧ್ಯಾಕಾಲದಲ್ಲಿ ನೀವು ಅವರ ಪೋಷಕರಾಗಿದ್ದಾಗ ನಿಮ್ಮಜೀವನ ಸಾರ್ಥಕವಾಗುವುದು ನಿನಗಾಗಿ ನಿನ್ನ ಕುಟುಂಬ, ನಿನ್ನ ಹಿರಿಯರಿಗಾಗಿ ಊರಿಗಾಗಿ ರಾಷ್ಟ್ರಕ್ಕಾಗಿ ನಿಮ್ಮ ಬದುಕನ್ನು ವಿಸ್ತಾರಗೊಳಿಸಿದರೆ ಅದೇ ನೀವು ಗುರುವಿಗೆ ಅರ್ಪಿಸುವ ಗುರುದಕ್ಷಿಣೆ, ಆದ್ದರಿಂದ ಒಳ್ಳೆಯ ಗುಣವಂತರಾಗಿ ಬದುಕಿ ಎಂದು ಆಶೀರ್ವದಿಸಿದರು.

ಶಾಲಾ ಹಿರಿಯ ಶಿಕ್ಷಕರಾದ ವಿಶ್ವನಾಥ ಮೂಡೂರು ಅವರ ಶಿಷ್ಯರಾಗಿದ್ದುದರಿಂದ ಗುರು ಶಿಷ್ಯರಿರ್ವರೂ ಸಂತೋಷ ಸಂಭ್ರಮವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಶಿಕ್ಷಕಿ ವೀಣಾಸರಸ್ವತಿ ನಿರೂಪಿಸಿದರು. ಶಿಕ್ಷಕಿಯರಾದ ನಳಿನಿ ವಾಗ್ಲೆ, ನಿಶ್ಚಿತಾ, ರಂಜಿಕಾ ಶಿಕ್ಷಕ ಗಣೇಶ್ ಉಪಸ್ಥಿತರಿದ್ದರು.

Highslide for Wordpress Plugin