ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್ 2015-16’ ರಲ್ಲಿ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ, ಕೃತಿ, ಶ್ವೇತಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಮಮತಾತರಬೇತಿ ನೀಡಿದ್ದರು.
