ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವರು ಆಯೋಜಿಸಿದ ತಾಲೂಕು ಮಟ್ಟದ ಮಕ್ಕಳಲ್ಲಿ ಪ್ರಾಚ್ಯ ಪ್ರಜ್ಞೆಯ ಅರಿವು ಮೂಡಿಸಲು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ವಿ.ಕೆ. ’ನಾನು ನೋಡಿದ ಐತಿಹಾಸಿಕ ಸ್ಥಳ’ ಎಂಬ ವಿಷಯದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.