ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ

ರೋಟರಿಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಎಂಬ ವಿಷಯದ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾದ ರೋನಾಲ್ಡ್ ಪಿಂಟೋ ಇವರು ಹತ್ತನೇ ತರಗತಿಯ ಮಕ್ಕಳಿಗೆ ಮಾಹಿತಿ ನೀಡಿದರು.

20151005_101630

20151005_101633

ಅವರು ಕನ್ನಡ ಮಾಧ್ಯಮ ಕಲಿಕೆಯ ಹೆಮ್ಮೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಸಾಧನೆಯನ್ನು ಮಾಡಬೇಕು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ನಂತರದ ವಿವಿಧ ಶಿಕ್ಷಣ ಅವಕಾಶಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ವಿವಿಧ ಕ್ಷೇತ್ರದ ಹುದ್ದೆಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ರೋಟರಿಕ್ಲಬ್‌ನ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಪರಮೇಶ್ವರಗೌಡ, ಇನರ್ ವಿಲ್‌ನ ಅಧ್ಯಕ್ಷೆ ಶಂಕರಿ.ಎಂ.ಎಸ್.ಭಟ್ ಮತ್ತು ಸದಸ್ಯರಾದ ಡಾ.ಎಂ.ಎಸ್.ಭಟ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಕೊಳತ್ತಾಯ, ರೂಪಲೇಖ ಪಾಣಾಜೆ ಮತ್ತು ಶಾಲಾ ಮುಖ್ಯಗುರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಕು. ನಿಶ್ಚಿತಾ ನಿರೂಪಿಸಿದರು.

Highslide for Wordpress Plugin