ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನ ಸಾಂದೀಪನ ವಿದ್ಯಾಲಯ ಶ್ರೀರಾಮಪುರದಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದ 14ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಶರ್ಮ ಪ್ರಥಮ ಬಹುಮಾನ ಪಡೆದು ಸಪ್ಟೆಂಬರ್ 12 ಮತ್ತು 13 ರಂದು ಚೆನ್ನೈನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರಾಜೇಶ್ ಶರ್ಮ ಮತ್ತು ಸೀಮಾ ಡಿ.ಎಸ್‌ರವರ ಪುತ್ರ.