ದಿನಾಂಕ 29-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ವೆಂಕಟರಮಣ ಭಟ್ ಮಂಕುಡೆ ಬೌದ್ಧಿಕ್ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಶಿಕ್ಷಕರಾದ ವಿಶ್ವನಾಥ ಮುಡೂರು ವಹಿಸಿದ್ದರು. ಶಾಖಾ ಮುಖ್ಯಶಿಕ್ಷಕ ವಿಘ್ನೇಶ್ ಹಾಗೂ ಪ್ರಜ್ವಲ್ ಪ್ರಾರ್ಥಿಸಿದರು. ಎಲ್ಲಾ ವಿದ್ಯಾರ್ಥಿಗಳು ಗುರುದಕ್ಷಿಣೆಯನ್ನು ಅರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಜಯ್ ಕುಮಾರ್ ನಿರೂಪಿಸಿದರು.

