ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯ- ಶೋಭಾ ಕೊಳತ್ತಾಯ

ಪೋಷಕರು, ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯವಿದೆ ಮತ್ತು ಪೋಷಕರು ಶಾಲೆಯ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ಅಭಿಪ್ರಾಯ ಪಟ್ಟರು.

20150629_160851

20150629_160929

ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಮುಖ್ಯ ಅತಿಥಿಗಳಾಗಿ ಈ ಮೇಲಿನ ಆಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪೋಷಕರು – ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಕುರಿತಾಗಿ ಸಂವಾದ ನಡೆಸಿದರು. ಸಭೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ಮಾತಾಜಿ ಮತ್ತು ಪ್ರೌಢಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

Highslide for Wordpress Plugin