ದಿನಾಂಕ 20-6-2015 ನೇ ಶನಿವಾರ ಅಪರಾಹ್ನ 2-15 ಕ್ಕೆ ಸರಿಯಾಗಿ ಪೋಷಕರ ಸಭೆ ನಡೆಸಲಾಯಿತು. ನಮ್ಮ ಶಾಲಾ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಗುರುಗಳು ಹಾಗೂ ಸಹಶಿಕ್ಷಕ ವೃಂದದವರು ಹಾಜರಿದ್ದರು.

ಮುಖ್ಯಗುರುಗಳು ಮಾತನಾಡಿ ಪೋಷಕರು ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದೂ, ಮಕ್ಕಳ ಹಿತಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು. ನಮ್ಮ ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣಭಟ್ ಕೊಂಕೋಡಿಯವರು ಪೋಷಕರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ತರಗತಿ ಶಿಕ್ಷಕಿಯಾದ ಶ್ರೀಮತಿ ನಮಿತಾರವರು ಮಕ್ಕಳ ಸ್ವಚ್ಛತೆ, ಶಿಸ್ತಿನ ಕುರಿತು, ಮಕ್ಕಳ ಬರವಣಿಗೆ ಇತ್ಯಾದಿ ವಿಷಯಗಳ ಕುರುತು ಮಾಹಿತಿಯನ್ನು ನೀಡಿದರು. ನಂತರ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಂತಿಮಂತ್ರದೊಂದಿಗೆ ಸಭೆಯು ಮುಕ್ತಾಯಗೊಂಡಿತು.