ಶಾಲಾ ಪ್ರವೇಶೋತ್ಸವ

ಭಾರತೀಯ ಶಿಕ್ಷಣ ಪದ್ದತಿಯು ಮಗುವಿನಲ್ಲಿ ದೇವರನ್ನು ಕಾಣುವಂತಿದ್ದು ಇಂದಿನ ದಿನ ಶಾಲಾ ಶಿಕ್ಷಕರು ಮಕ್ಕಳಿಗೆ ತಿಲಕವಿಟ್ಟು, ಆರತಿ ಬೆಳಗಿ ಸ್ವಾಗತಿಸುವ ಮೂಲಕ ಮಗುವನ್ನು ಬರಮಾಡಿಕೊಳ್ಳುವ ಪದ್ದತಿಯು ನಮ್ಮ ಶಾಲೆಯಲ್ಲಿ ವಿಶೇಷವಾಗಿರುತ್ತದೆ. ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯಪೂರಕ ಶಿಕ್ಷಣದ ಅಗತ್ಯತೆಯನ್ನು ಅರಿತು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು; ಎಂದು ವಿವೇಕಾನಂದ ಕನ್ನಡ ಮಾಧ್ಯಮಶಾಲಾ ಸಂಚಾಲಕರಾದ ರವೀಂದ್ರ ಪಿ. ಇವರು ಶಾಲಾ ಪ್ರವೇಶೋತ್ಸವದಂದು ನುಡಿದರು.

20150612_120111

20150612_103728

20150612_105057

20150612_110046

20150612_113706

ದೀಪಪ್ರಜ್ವಲನೆ, ಸರಸ್ವತಿ ವಂದನೆ, ಹಾಗೂ ಘೃತಾಹುತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣ ಇವರು ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಖಜಾಂಚಿ ಅಚ್ಯುತ ನಾಯಕ್ ವಹಿಸಿದ್ದರು. ಶಿಕ್ಷಕ ವೃಂದ ಉಪಸ್ಥಿತರಿದ್ದು ಮಕ್ಕಳಿಗೆ ಹಾಗೂ ಪೋಷಕರಿಗೆ ಸಿಹಿತಿಂಡಿ ಹಂಚಿದರು.

Highslide for Wordpress Plugin