ಗಣಹೋಮದೊಂದಿಗೆ ಆರಂಭಗೊಂಡ ಶಾಲೆಯ ಹಬ್ಬದ ವಾತಾವರಣವು ಮಕ್ಕಳಲ್ಲಿ ಹರುಷ ತಂದಿದೆ. ಶಾಲಾ ಮಾತಾಜಿಯವರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಕ್ಕಳನ್ನು ತಿಲಕವಿಟ್ಟು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡ ರೀತಿ ಖುಷಿ ತಂದಿದೆ. ಹೀಗೆಂದು ಮನದ ಮಾತನ್ನು ಬಿಚ್ಚಿಟ್ಟವರು ಪೋಷಕರು.
ವಿವೇಕಾನಂದ ಕನ್ನಡ ಶಾಲೆಯ ಆರಂಭೋತ್ಸವದಂದು ಎಲ್ಲಾ ಮಕ್ಕಳನ್ನು ಸ್ವಾಗತಿಸಿ ಸಿಹಿನೀಡಿ ಬರಮಾಡಿಕೊಳ್ಳಲಾಯಿತು. ಹಬ್ಬದ ವಾತಾವರಣವು ವಿದ್ಯೆಯ ವಿಕಾಸಕ್ಕೆ ಪೂರಕವಾಗಲಿ ಎಂದು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣಗೌಡ ಹಾರೈಸಿದರು. ಶಾಲಾ ಆಡಳಿತಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು ಪೋಷಕರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.


