ವಿವೇಕಾನಂದ ಕನ್ನಡ ಶಾಲೆ, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ‘ಸುಜ್ಞಾನ ಪುಸ್ತಕ ಜಾಥಾ-2015’ ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಫಾಟಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಸದಸ್ಯರಾದ ಶೋಭಾ ಕೊಳತ್ತಾಯ, ಸುನೀತಾ ಚಂದು ಶೆಟ್ಟಿ, ಅಚ್ಚುತ ಭಟ್ ಸುಳ್ಯಪದವು, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಅಂಬಿಕಾ, ಸದಸ್ಯರಾದ ಸುರೇಖಾ, ಪೋಷಕರಾದ ಮಹಾದೇವಶಾಸ್ತ್ರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕರಾದ ಡಾ.ವಸಂತ ಎನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ್ ಬಡೆಕ್ಕಿಲ, ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಾಂಕಿರಿ, ಶ್ಯಾಂ ಭಟ್ ಮುಂತಾದ ಸಹೃದಯರು, ಶಾಲಾ ಗ್ರಂಥಾಲಯಕ್ಕೆ ಪುಸ್ತಕ ದೇಣಿಗೆ ನೀಡಿದರು.




ಅನಂತರ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರೊಂದಿಗೆ ಬೊಳುವಾರಿನಿಂದ ಹೊರಟ ಜಾಥಾದಲ್ಲಿ ಪುತ್ತೂರಿನ ಹಲವಾರು ಗಣ್ಯರು, ವಿದ್ಯಾಭಿಮಾನಿಗಳು, ಪುಸ್ತಕ ಪ್ರೇಮಿಗಳು ಸಹೃದಯರು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ನೀಡಿ ಓದಿನ ಹವ್ಯಾಸ ಬೆಳೆಸುವಂತೆ ಮಕ್ಕಳಿಗೆ ಶುಭ ಹಾರೈಸಿದರು.