ಶಾಲಾ ಹಿರಿಯ ಕ್ರೀಡಾಪಟು ಅಶ್ವಥ್‌ರಿಂದ ಮಕ್ಕಳೊಂದಿಗೆ ಸಂವಾದ

ಶಾಲಾ ಹಿರಿಯ ಕ್ರೀಡಾಪಟು ಪ್ರಸ್ತುತ ಬೆಂಗಳೂರಿನ ಮೈಕ್ರೋ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅಶ್ವಥ್ ಇವರು 9 ಮತ್ತು ಹತ್ತನೇ ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಮಾಡಿದ ಸಾಧನೆಗಳಿಗೆ ಶಿಕ್ಷಕರು ನೀಡಿದ ಪ್ರೋತ್ಸಾಹವನ್ನು ಸ್ಮರಿಸುತ್ತಾ ಮುಂದಿನ ಕಾಲೇಜು ಮತ್ತು ವೃತ್ತಿ ಜೀವನದಲ್ಲಿ ಬೆಳೆಸಿಕೊಂಡ ನಾಯಕತ್ವ ಮತ್ತು ಸ್ಫೂರ್ತಿದಾಯಕ ಮನೋಭಾವವು ಈ ಸಂದರ್ಭದಲ್ಲಿ ಸಹಾಯಕವಾಯಿತು ಎಂದರು.

ವೃತ್ತಿಗಾಗಿ ನಡೆಸಿದ ಹುಡುಕಾಟ ಮತ್ತು ಆ ಸಂದರ್ಭದಲ್ಲಿ ಎದುರಾದ ಕಷ್ಟಕರ ಸನ್ನಿವೇಶಗಳನ್ನು ಹೇಳುತ್ತಾ ಈಗ ದೊರೆತಿರುವ ಒಳ್ಳೆಯ ಕೆಲಸ ಆ ಮೂಲಕ ಇಲ್ಲಿನ ಕ್ರೀಡಾಸಕ್ತ ಬಡ ಮಕ್ಕಳಿಗೆ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದರು. ಹಿರಿಯ ಶಿಕ್ಷಕರಾದ ಲೀಲಾವತಿ, ಪೂರ್ಣಿಮಾ, ರೇವತಿ ಇವರು ಉಪಸ್ಥಿತರಿದ್ದರು.

20150117_105908

20150117_105857

Highslide for Wordpress Plugin