ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಪ್ರೌಢವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣರವರು ವಿಜೇತ ಮಕ್ಕಳಿಗೆ ಶುಭಹಾರೈಸುತ್ತ ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.


ಈ ಸಂದರ್ಭದಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ 95+ ನ ‘ದಾರಿ ದೀಪ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸದಸ್ಯರಾದ ರವಿನಾರಾಯಣ ಎಮ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ತಿರುಮಲ ಭಟ್ ಮಾತನಾಡಿ ಹಿಂದಿನ ಮತ್ತು ಈಗಿನ ಶಿಕ್ಷಣದ ವ್ಯವಸ್ಥೆಗಳ ಬಗ್ಗೆ ಹಾಗೂ ಶಾಲಾ ಅಭಿವೃದ್ಧಿಯನ್ನು ನೆನಪಿಸಿಕೊಂಡರು. ಹಿರಿಯ ಶಿಕ್ಷಕಿ ರೇವತಿ ಉಪಸ್ಥಿತರಿದ್ದರು.