ವಾರ್ಷಿಕ ಕ್ರೀಡಾಕೂಟ

ವಿವೇಕಾನಂದ ಕನ್ನಡ ಶಾಲೆಯು ಶಿಕ್ಷಣದೊಂದಿಗೆ ಪಠ್ಯಪೂರಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿದ್ದು ಇಲ್ಲಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ನೆರವಾಗುತ್ತಿದೆ ಎಂದು ಕ್ರೀಡಾಜ್ಯೋತಿ ಬೆಳಗಿಸಿ ಸ.ಹಿ.ಪ್ರಾಥಮಿಕ ಶಾಲೆ ದರ್ಬೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ರೈಯವರು ನುಡಿದರು. ದೀಪ ಬೆಳಗಿಸಿ ಉದ್ಫಾಟಿಸಿದ ಬಿ.ಇ.ಎಂ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಾಧವ ಇವರು ಶುಭ ಹಾರೈಸಿದರು. ಕಾವು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ವಸಂತಿ ಇವರು ತಮ್ಮ ಬಾಲ್ಯದ ನೆನಪುಗಳನ್ನು ಮಕ್ಕಳ ಮುಂದಿರಿಸಿದರು. ಶಾಲಾ ಅಧ್ಯಕ್ಷರಾದ ಡಾ.ಕೃಷ್ಣಭಟ್ ಕೊಂಕೋಡಿ, ಸಂಚಾಲಕರಾದ ರವೀಂದ್ರ.ಪಿ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ ಬಡೆಕ್ಕಿಲ, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಕು.ಲೀಲಾವತಿ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ವಂದನಾರ್ಪಣೆಗೈದರು.

SHA_8357

SHA_8404

SHA_8442

SHA_8356

SHA_8381

SHA_8390

SHA_8391

Highslide for Wordpress Plugin