ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗ, ತೆಂಕಿಲ, ಪುತ್ತೂರು ಮತ್ತು ಯಕ್ಷನಂದನ ಕಲಾ ಸಂಘ ಕ್ಯೊಲ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22-11-2014 ರಂದು ‘ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ ನಡೆಯಿತು.

yakshagana

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ಭಂಡಾರಿ ಯಕ್ಷಗಾನದಲ್ಲಿ ಮುಖವರ್ಣಿಕೆ ಮಹತ್ವದ ಬಗ್ಗೆ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ ಯಕ್ಷನಂದನ ಕಲಾ ಸಂಘದ ಅಧ್ಯಕ್ಷರಾದ ಶ್ರೀ ಹರಿಕಿರಣ್ ಕ್ಯೊಲ ಸಂಘವು ಯಕ್ಷಗಾನದ ಬಗ್ಗೆ ಅಳವಡಿಸಿಕೊಂಡ ಕಾರ್ಯಾಗಾರದ ಉದ್ದೇಶ, ಅನುಕೂಲಗಳ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯರವರು ಉಪಸ್ಥಿತರಿದ್ದರು. ಶ್ರೀ ಗಣರಾಜ್ ಕುಂಬ್ಳೆ ರವರು ಪ್ರಸಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಧನ್ಯವಾದವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ ಮತ್ತು ನಿರೂಪಣೆಯನ್ನು ಶಿಕ್ಷಕರಾದ ಶ್ರೀ ವೆಂಕಟೇಶ್ ಪ್ರಸಾದ್ ನೆರವೇರಿಸಿದ್ದರು.

Highslide for Wordpress Plugin