ಸಂಭ್ರಮ – 2014

ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾದ ಕ್ರಿಯಾಶೀಲತೆ, ಸಮೂಹ ಮಾಧ್ಯಮದ ಸದ್ಬಳಕೆ, ಗೀತ ವೈವಿಧ್ಯ ದೇಶಭಕ್ತಿ, ಕರಕುಶಲ ಕಲೆ, ಕ್ರಿಯಾಶೀಲತೆ, ಶಿಕ್ಷಣ- ವೈಜ್ಞಾನಿಕ ಚಿಂತನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕಿನ ಹಾಗೂ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ‘ಸಂಭ್ರಮ – 2014’ ಶಿಬಿರವು ದಿನಾಂಕ 8-10-2014 ರಂದು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ಆರಂಭಗೊಂಡಿತು.

IMG_20141008_110913

IMG_20141008_110613

IMG_20141008_110846

IMG_20141008_110900

ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಉದ್ಫಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳಾದ ಪ್ರಾರ್ಥನಾ ಕರ್ಗಲ್ಲು, ಸೌಮ್ಯಶ್ರೀ, ಅನೀಶ್ ಮತ್ತು ಯಶ್ವಿತ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ಮತ್ತು ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ವ್ಸಂತ ಸುವರ್ಣ ಹಾಗೂ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಶಿಕ್ಷರಾದ ಹರಿಪ್ರಸಾದ್ ಮತ್ತು ಅಜಿತ್ ನಿರ್ವಹಿಸಿದರು.

Highslide for Wordpress Plugin