ನವದಂಪತಿ ಸಮಾವೇಶ

ಕುಟುಂಬವು ಭಾರತೀಯ ಸಂಸ್ಕೃತಿಯ ಜೀವಾಳ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ,. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮಾಡುವ ಬದಲು ಧರ್ಮದಾಚರಣೆ ಅರಿವನ್ನು ಕಂಡುಕೊಳ್ಳುವುದು ಮುಖ್ಯ. ಆಗಲೇ ಸಾರ್ಥಕ್ಯ ಬದುಕು ಸಾಧ್ಯ ಎಂದು ಕುಟುಂಬ ಪ್ರಭೋಧಿನಿಯ ಅಖಿಲ ಭಾರತ ಪ್ರಮುಖರಾದ ಸು.ರಾಮಣ್ಣ ಇವರು ನುಡಿದರು.

SHA_2011

SHA_2019

SHA_2014

ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಬೌದ್ಧಿಕ್ ನೀಡಿದ ಇವರು ಭಾಗವಹಿಸಿದ ಎಲ್ಲಾ ದಂಪತಿಗಳಿಗೆ ಜಗತ್ತಿಗೇ ಮಾದರಿಯಾದ ಭಾರತೀಯ ಕೌಟುಂಬಿಕ ಪರಂಪರೆಯ ಮಹತ್ವವನ್ನು ತಿಳಿಸಿದರು.

ಅನಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ನಡೆದ ಪ್ರತ್ಯೇಕ ಅವಧಿಗಳಲ್ಲಿ ಡಾ|ಕಮಲಾ ಭಟ್ ಹಾಗೂ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ಮಾತನಾಡಿದರು. ಹಿರಿಯ ದಂಪತಿಗಳಾಗಿ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಸಾಧನಾ ದಂಪತಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ನವದಂಪತಿಗಳು ಪರಸ್ಪರ ಪರಿಚಯ ಮಾಡಿಕೊಂಡು ತದನಂತರ ಕಾರ್ಯಕ್ರಮದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀಮತಿ ಶೋಭಿತಾ ಸತೀಶ್ ರವರ ಪಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಶ್ರೀ ರವೀಂದ್ರ ಪಿ. ಸ್ವಾಗತಿಸಿ, ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ನಿರೂಪಿಸಿದರು.

Highslide for Wordpress Plugin