ಪುತ್ತೂರು: ಹುಟ್ಟುವಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಉಳಿಯುತ್ತದೆ ಉಸಿರು ಇರುವುದಿಲ್ಲ. ಸಮಾಜದಲ್ಲಿ ಶಾಶ್ವತ ಹೆಸರನ್ನು ಉಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ಯಾಮ ಪ್ರಸಾದ ಶಾಸ್ತ್ರಿ ಇವರು ಈ ರೀತಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನೆನಪಿಸುತ್ತಾ ವಿವೇಕಾನಂದ ಶಾಲಾ ಆಡಳಿತ ಮಂಡಳಿ ಸಂಚಾಲಕ ರವೀಂದ್ರ ಪಿ.ರವರು ಈ ಮೇಲಿನಂತೆ ನುಡಿದರು.

ಸೆ. 1 ರಂದು ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೃಷ್ಣ ಭಟ್ ಕೊಂಕೋಡಿ, ಸದಸ್ಯ ಅಚ್ಚುತ ನಾಯಕ್ ಮತ್ತು ಶೋಭಾ ಕೊಳತ್ತಾಯರವರು, ಶಿಕ್ಷಕರು ಮತ್ತು ಶಾಲಾ ಮಕ್ಕಳು ಶ್ರದ್ಧಾಂಜಲಿ ಅರ್ಪಿಸಿದರು.