ದಿನಾಂಕ 11-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದನೇ ತರಗತಿಯ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಪುತ್ತೂರಿನ ಪ್ರಮುಖ ಕಚೇರಿಗಳಾದ ಪುತ್ತೂರು ಪುರಸಭೆ, ಪೋಲೀಸ್ ಸ್ಟೇಷನ್, ಅಂಚೆ ಕಚೇರಿ, ಕೆನರಾ ಬ್ಯಾಂಕ್ಗೆ ತೆರಳಿ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟಿ ಆಶಿರ್ವಾದ ಪಡೆದುಕೊಂಡರು. ಹೋದ ಎಲಾ ಕಚೇರಿಗಳಲ್ಲೂ ಸಿಬ್ಬಂದಿ ವರ್ಗದವರು ಉತ್ತಮವಾಗಿ ಸ್ಪಂದಿಸಿ ವಿದ್ಯಾರ್ಥಿಗಳ ಮನಸ್ಸನ್ನು ಸಂತಸಗೊಳಿಸಿದರು. ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರಾದ ಅಜಿತ್, ಹರಿಪ್ರಸಾದ್ ಮತ್ತು ಶಿಕ್ಷಕಿಯರಾದ ಶ್ರೀಮತಿ ವೀಣಾಸರಸ್ವತಿ, ಶ್ರೀಮತಿ ಭವ್ಯ ಮತ್ತು ಕು.ಲಾವಣ್ಯ ಉಪಸ್ಥಿತರಿದ್ದರು.


