Solar Reflected water heater
ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಶ್ವಿನಿ .ಯು. ನಾಯಕ್ ಇವರು ‘Solar Reflected water heater’ ಎಂಬ ಮಾದರಿಯನ್ನು ಮಂಡಿಸಿದ್ದು ಇದನ್ನು ದೊಡ್ಡ ದೊಡ್ಡ ಇಂಡಸ್ಟ್ರೀಗಳಲ್ಲಿ ದೊಡ್ಡ ಪ್ರಮಾಣದ ವ್ಯಾಸವಿರುವ ಡಿಶ್ ಬಳಸಿ ಮಾಡಲಾಗುತ್ತದೆ. ಡಿಶ್‌ಗಳು ಸೋಲಾರ್ ಟ್ರಾಕರ್ ವಿಧಾನದಿಂದ ಸೂರ್ಯನ ದಿಕ್ಕಿಗನುಗುಣವಾಗಿ ತಿರುಗುತ್ತದೆ.ಸಣ್ಣ ಪ್ರಮಾಣದಲ್ಲಿ ಮನೆಗೆ ಬೇಕಾದ ಬಿಸಿ ನೀರು ಕಾಯಿಸಲು ಉಪಯುಕ್ತವಾಗಿದೆ. ಕೆಲಸ ಹೆಚ್ಚಾದರೂ ಇಂಧನದ ಉಳಿತಾಯವಾಗುತ್ತದೆ. ಸೂರ್ಯನ ಬೆಳಕು ಡಿಶ್‌ನ ಮೇಲಿನ ಕನ್ನಡಿಯ ಮೇಲೆ ಬಿದ್ದು ಪ್ರತಿಪಲನಗೊಂಡು ಅಲ್ಯೂಮೀನಿಯಂ ಪಾತ್ರೆಗೆ ಕೇಂದ್ರಿಕೃತವಾಗುತ್ತದೆ. ಅಲ್ಲಿ ಸೂರ್ಯನ ಬೆಳಕಿನಿಂದ ಶಾಖ ಉತ್ಪತ್ತಿಯಾಗುತ್ತದೆ. ಅಲ್ಲಿಗೆ ಪೈಪಿನ ಮೂಲಕ ನೀರು ಹಾಯಿಸಿದಾಗ ಶಾಖದಿಂದ ನೀರು ಬಿಸಿಯಾಗುತ್ತದೆ.
SMART REFRIGERATOR CUM WATER HEATER

ದಿನಾಂಕ 4-8-2014 ಹಾಗೂ 5-8-2014 ರಂದು ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ ಇವರು SMART REFRIGERATOR CUM WATER HEATER ಎಂಬ ಮಾದರಿಯನ್ನು ಮಂಡಿಸಿದ್ದು ಇದು ಸ್ಟೀಲ್ ಕಂಟೈನರ್‌ನ ನಡುವೆ ಥರ್ಮಕಪಲ್‌ನ್ನು ಜೋಡಿಸಿ ಅದಕ್ಕೆ ವಿದ್ಯುತ್ತನ್ನು ಹಾಯಿಸಿದಾಗ ಅದರ ಒಂದು ಭಾಗ ಬಿಸಿ ಹಾಗೂ ಇನ್ನೊಂದು ಭಾಗ ತಣ್ಣಗೆ ಆಗಲು ಪ್ರಾರಂಭಿಸುತ್ತದೆ. ನಂತರ ಈ ಎರಡು ಕಂಟೈನರ್ಸ್‌ಗೆ ನೀರು ಹಾಕಿದಾಗ ಥರ್ಮಕಪಲ್ ಬಿಸಿಯಾದ ಕಡೆಗಿನ ಕಂಟೈನರ್‌ನ ನೀರು ಬಿಸಿಯಾಗುತ್ತದೆ. ತಪ್ಪಾದ ಕಡೆಗಿನ ಕಂಟೈನರ್‌ನ ನೀರು ತಂಪಾಗುತ್ತದೆ. ಈ ಮಾದರಿಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
Air conditioned Moto Helmet

ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಉಬೈದ್ ಇವರು Air Conditioned Moto Helmet ಎಂಬ ಮಾದರಿಯನ್ನು ಮಂಡಿಸಿದ್ದು ಈ ಮಾದರಿಯು ಥರ್ಮೋಕಪಲ್ ಎಂಬ ವಸ್ತುವಿಗೆ ವಿದ್ಯುತ್ ಕೊಟ್ಟಾಗ ಒಂದು ಬದಿ ಉಷ್ಣ ಮತ್ತು ತಂಪಾಗುವ ತತ್ವ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. 12 ವ್ಯಾಟ್ ವಿದ್ಯುತ್‌ನಲ್ಲಿ ಕಾರ್ಯನಿರ್ವಹಿಸುವ ಈ ಯಂತ್ರಕ್ಕೆ ದ್ವಿಚಕ್ರವಾಹನದ ಶುಷ್ಕಕೋಶದಿಂದ (ಡಾಪ್ಟರ್ ನ ಮೂಲಕ) ಹಾಯಿಸಿದ ವಿದ್ಯುತ್‌ನಿಂದ ಕೆಲಸ ಮಾಡುತ್ತದೆ.