ವ್ಯಕ್ತಿಯು ತಾನು ಕಲಿತಿರುವುದನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಮತ್ತು ತಾನು ಕಲಿಯುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳುವ ಕೈಕಂರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲೂ ಅಗಾಧವಾದ ಶಕ್ತಿಹುದುಗಿರುತ್ತದೆ. ಆದರೆ ಆತನಿಗೆ ಅದರ ಅರಿವಿರುವುದಿಲ್ಲ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆ ಶಕ್ತಿಯು ಸಾಗರೋಲ್ಲಂಘನ ಮಾಡಿದ ಹನುಮಂತನಂತೆ ಹೊರ ಚಿಮ್ಮುತ್ತದೆ. ಎಂದು ಗುರುವಂದನೆಯನ್ನು ಸ್ವೀಕರಿಸಿದ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ವೇದವ್ಯಾಸರು ಮಕ್ಕಳನ್ನು ಆಶೀರ್ವದಿಸುತ್ತ ಹೇಳಿದರು.


ದಿನಾಂಕ 11-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶ್ರೀಯುತರ ನಿವಾಸಕ್ಕೆ ತೆರಳಿ ಗುರುಕಾಣಿಕೆಯನ್ನಿತ್ತು ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಗೆ ಉಪಹಾರದೊಂದಿಗೆ ನೆನಪಿನ ಕಾಣಿಕೆಯನ್ನಿತ್ತು ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಿಸಿದರು.