ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಡೆಕಲ್ಲು ಇಲ್ಲಿ ದಿನಾಂಕ 5-6-2014 ರಂದು ವಿಶ್ವಪರಿಸರ ದಿನಾಚರಣೆಯನ್ನು ವಿವಿಧ ತಳಿಯ ಸಸಿಗಳನ್ನು ಸುಮಾರು 1 ಎಕ್ರೆ ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು. ಇದರ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜಿಡೆಕಲ್ಲು ಶಾಲೆಯ ಮುಖ್ಯಗುರುಗಳು ಮತ್ತು ರಾಷ್ಟ್ರೀಯ ಸೇವಾಯೋಜನಾ ಅಧ್ಯಕ್ಷರಾದ ಶ್ರೀರಘುವೀರ್ ಉಬರಡ್ಕ ಹಾಗೂ ಊರಿನ ಗಣ್ಯರಾದ ಶ್ರೀ ಸಂಪತ್ತು ಕುಮಾರ್ ಜೈನ್, ಡಿ.ಇಡಿ ಪ್ರಾಂಶುಪಾಲರಾದ ಶ್ರೀಮತಿ ಅನುರಾಧ ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು, ಗೈಡ್ಸ್ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ಅಲ್ಲದೇ ಜಿಡೆಕಲ್ಲು ಶಾಲೆಯ ಪೋಷಕ ಮಂಡಳಿಯ ಸದಸ್ಯರು, ಅಧ್ಯಾಪಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

