ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ – ಗಂಗಾಧರ ಬೆಳ್ಳಾರೆ

ಮನೆಯು ಮಂದಿರವಾಗುವುದು ಮತ್ತು ಮಗುವು ದೇವರಾಗುವುದು ಪೋಷಕರ ಮಾತೆಂಬ ಮಂತ್ರಗಳಿಂದ ಎಂದು ಸಾಲ್ಮರ ಸ್ಕೋಪ್ ಕೌನ್ಸೆಲಿಂಗ್ ಸೆಂಟರ್ ನಿರ್ದೇಶಕ ಗಂಗಾಧರ ಬೆಳ್ಳಾರೆಯವರು ಹೇಳಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದು ಎರಡು ಮತ್ತು ಮೂರನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

vkm-photo

ಕೌಟುಂಬಿಕ ಪರಿಸರವು ಮಕ್ಕಳ ಮನೋವಿಕಾಸದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ ಎಂದ ಅವರು ಪೋಷಕರ ನೇತ್ಯಾತ್ಮಕ ವರ್ತನೆಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ಮಾನಸಿಕ ಭದ್ರತೆಯ ಮೇಲೆ ದುಶ್ಪರಿಣಾಮ ಉಂಟುಮಾಡುತ್ತವೆ ಎಂದು ಕೌನ್ಸೆಲಿಂಗ್ ಉದಾಹರಣೆಗಳ ಮೂಲಕ ವಿವರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಮತ್ತು ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿ ವಂದಿಸಿದರು.

IMG_4352

Highslide for Wordpress Plugin